INFO Breaking
Live
wb_sunny

Breaking News

Bagalkote: ಮುಧೋಳದ ಮನೆಯೊಂದರಲ್ಲಿ ಕಳ್ಳತನಕ್ಕೆ ಬಂದ ಚಡ್ಡಿ ಗ್ಯಾಂಗ್,ಆದರೆ ಅದನ್ನು ಅಮೆರಿಕದಿಂದಲೇ ತಪ್ಪಿಸಿದ ಯುವತಿ!

Bagalkote: ಮುಧೋಳದ ಮನೆಯೊಂದರಲ್ಲಿ ಕಳ್ಳತನಕ್ಕೆ ಬಂದ ಚಡ್ಡಿ ಗ್ಯಾಂಗ್,ಆದರೆ ಅದನ್ನು ಅಮೆರಿಕದಿಂದಲೇ ತಪ್ಪಿಸಿದ ಯುವತಿ!

ಬಾಗಲಕೋಟೆ ಜಿಲ್ಲೆಯಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಹೆಚ್ಚಾಗಿದ್ದು,ಮನೆಗೆ ಕನ್ನ ಹಾಕಲು ಯತ್ನಿಸಿದ ಚಡ್ಡಿ ಗ್ಯಾಂಗ್ ನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬಾಗಲಕೋಟ ಜಿಲ್ಲೆಯ ಮುಧೋಳದ ಸಿದ್ದರಾಮೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು,ಈ ಗ್ಯಾಂಗ್ ಕೃತ್ಯ ಬಯಲಾಗಿದ್ದು ಅಮೇರಿಕಾದಲ್ಲಿದ್ದ ಮಗಳಿಂದ.ಹೌದು ಹನಮಂತಗೌಡ ಸಂಕಪ್ಪನವರ ಎಂಬುವರ ಮನೆಗೆ ನುಗ್ಗಿದ ಚಡ್ಡಿ ಗ್ಯಾಂಗ್ ರಾಜಾರೋಷವಾಗಿ ಕಳ್ಳತನ ಮಾಡುವ ದೃಶ್ಯವನ್ನ ಅಮೇರಿಕಾದಿಂದಲೇ ತಮ್ಮ ಮೊಬೈಲ್ ನಲ್ಲಿ ಶೃತಿ ಸಂಕಪ್ಪನವರ ನೋಡಿದ್ದಾರೆ.11ಗ್ರಾಂ ಚಿನ್ನ ಹಾಗೂ 40 ಸಾವಿರ ನಗದು ಹಣ ಕದ್ದು ಪರಾರಿಯಾಗಿರುವ ಗ್ಯಾಂಗ್‌.
ಕಳ್ಳತನವಾಗುವ ದೃಶ್ಯಗಳನ್ನ ನೋಡಿದ ಶೃತಿ ತಮ್ಮ ಮನೆಯವರಿಗೆ ಈ ಮಾಹಿತಿ ತಿಳಿಸಿದ್ದಾರೆ.ನಂತರ ಮನೆಯವರು ಎಚ್ಚೆತ್ತುಕೊಂಡಿದ್ದು ತಕ್ಷಣವೇ ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.ಸದ್ಯ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

0 Comments:

Responsive

Ads

Here