ಸವದತ್ತಿ ಪಟ್ಟಣದಲ್ಲಿ ಅದ್ದೂರಿಯಾಗಿ ನೆರವೇರಿದ ಹೂಗಾರ ಶ್ರೀ ಶರಣ ಮಾದಯ್ಯನವರ ಜಯಂತಿ ಉತ್ಸವ ಕಾರ್ಯಕ್ರಮ..!Belagavi
ಸವದತ್ತಿ ಪಟ್ಟಣದಲ್ಲಿ ರವಿವಾರ 11 ಗಂಟೆಗೆ ಅದ್ದೂರಿಯಾಗಿ ಹೂಗಾರ ಸಮಾಜದ ಮಾದಯ್ಯನವರ ಅದ್ದೂರಿ ಜಯಂತೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಾದಯ್ಯನವರ ಭಾವಚಿತ್ರಕ್ಕೆ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹಾಗೂ ಸವದತ್ತಿ ಶಾಸಕ ವಿಶ್ವಾಸ ವೈದ್ಯ,ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಸೇರಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಚಾಲನೆ ನೀಡುವ ಸಂದರ್ಭದಲ್ಲಿ ಹೂಗಾರ ಸಮಾಜದ ತಾಲೂಕಾಧ್ಯಕ್ಷ ಶಿವಾನಂದ.ಚ.ಹೂಗಾರ್,ಜಿಲ್ಲಾ ಉಪಾಧ್ಯಕ್ಷ ಪ್ರಭುಲಿಂಗ ಹೂಗಾರ್ ಸೇರಿದಂತೆ ಜಿಲ್ಲೆ ಹಾಗೂ ತಾಲೂಕಿನ ಸಮಾಜದ ಮುಖಂಡರು,ಮಹಿಳೆಯರು ನಾಗರಿಕರು ಭಾಗಿಯಾಗಿದ್ದರು.
ಈ ಮೆರವಣಿಗೆ ಸವದತ್ತಿ ಪಟ್ಟಣದ ಎಪಿಎಂಸಿ ವೃತ್ತದಿಂದ ಕಡಕೋಳ ಬ್ಯಾಂಕ್ ವೃತ್ತದ ಮೂಲಕ ಮಾಮನಿ ಕಲ್ಯಾಣ ಮಂಟಪದವರೆಗೂ ಮೆರವಣಿಗೆ ಸಾಗಿತು.
0 Comments: