ಧಾರವಾಡ ಎಸ್ಪಿ ಎದುರೇ ಗ್ರಾಮೀಣ CPI ವಿರುದ್ದ ಸಿಟ್ಟಿಗೆದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ..! Dharwad
ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗ್ರಾಮೀಣ ಸಿಪಿಐ ವಿರುದ್ದ ಗರಂ ಆಗಿರುವ ಘಟನೆ ನಡೆದಿದೆ.
ಮೊನ್ನೆ ತಾನೇ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ಲಾಠಿ ಚಾರ್ಜ್ ಮಾಡಲಾಗಿತ್ತು.ಇಂದು ಅದೇ ಗ್ರಾಮಕ್ಕೆ ಭೇಟಿ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಸ್.ಪಿ ಸಮ್ಮುಖದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ವಿರುದ್ದ ಸಿಟ್ಟಿಗೆದ್ದಿರುವ ಘಟನೆ ನಡೆದಿದೆ.
ಜನರನ್ನ ಉದ್ದೇಶಿಸಿ ಮಾತನಾಡುವ ವೇಳೆ ಸಿಟ್ಟಿಗೆದ್ದ ಕೇಂದ್ರ ಸಚಿವ ಜೋಶಿ ಮೈಕ್ ಕೆಳಗೆ ಎಸೆದು ಎಸ್.ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ.ಯಾರನ್ನ ಕೇಳಿ ಗ್ರಾಮದಲ್ಲಿ ಲಾಠಿ ಚಾರ್ಜ್ ಮಾಡಲಾಗಿದೆ ಕೂಡಲೇ ಈ ಸಂಬಂಧ ಅವರನ್ನ ಅಮಾನತ್ತು ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ಡಿವೈಎಸ್ ಪಿ ಇದ್ದರೂ ಕೂಡ ಅವರ ಅನುಮತಿ ಪಡೆಯದೇ ಅದು ಹೇಗೆ ಲಾಠಿ ಚಾರ್ಜ್ ಮಾಡಿದ್ರೂ ಇವರು.ಎಸ್ ಪಿ ಅವರೇ ನಿಮ್ಮ ಗಮನಕ್ಕೆ ತರದೇ ಹೇಗೆ ಈ ರೀತಿ ಜನರ ಮೇಲೆ ಲಾಠಿ ಚಾರ್ಜ್ ಮಾಡಲು ಅವಕಾಶ ಯಾರು ಕೊಟ್ಟರು ಇವರಿಗೆ ಎಂದು ಆಕ್ರೋಶವನ್ನ ಹೊರಹಾಕಿದ್ದಾರೆ.
ಇದಕ್ಕೂ ಮೊದಲು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ರು.ಅಂದು ಗಣಪತಿ ವಿಸರ್ಜನೆ ವೇಳೆ ಏನು ಘಟನೆ ನಡೆದಿದೆ ಎನ್ನುವುದರ ಮಾಹಿತಿಯನ್ನ ಪಡೆದ್ರು.ಇವರಿಗೆ ಶಾಸಕ ಅರವಿಂದ ಬೆಲ್ಲದ,ಮಾಜಿ ಶಾಸಕ ಅಮೃತ್ ದೇಸಾಯಿ ಸಾಥ್ ನೀಡಿದ್ದಾರೆ.
0 Comments: