ಬೆಳಗಾವಿಯಲ್ಲಿ ಹೂಗಾರ್ ಸಮಾಜದಿಂದ ಜಿಲ್ಲಾಮಟ್ಟದ ಸಮಾವೇಶ..!Belagavi
ಜಿಲ್ಲಾ ಹೂಗಾರ,ಗುರವ,ಜೀರ್ ಮತ್ತು ಪೂಜಾರ ಸಮಾಜದ ಸೇವಾ ಸಂಘದಿಂದ ಸೆ.14 ರಂದು ಜಿಲ್ಲಾ ಮಟ್ಟದ ಸಮಾವೇಶವನ್ನ ಸವದತ್ತಿ ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ 11ಗಂಟೆಗೆ ಹಮ್ಮಿಕೊಳ್ಳಲಾಗಿದೆ..
ಶಿವಶರಣ ಹೂಗಾರ ಮಾದಯ್ಯ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸಮುದಾಯದವರು ಯಶಸ್ಸಿಗೆ ಶ್ರಮಿಸಬೇಕು ಎಂದು ಸವದತ್ತಿ ತಾಲೂಕಿನ ಅಧ್ಯಕ್ಷರಾದ ಶಿವಾನಂದ ಹೂಗಾರ ತಿಳಿಸಿದ್ದಾರೆ.
ಸವದತ್ತಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಮುದಾಯದ ಪ್ರಮುಖ ಬೇಡಿಕೆಗಳನ್ನ ಸಲ್ಲಿಸಲು ಕಾರ್ಯಕ್ರಮ ಸಹಕಾರಿಯಾಗಿಲಿದೆ.ಸಮಾವೇಶ ದಿನ ಬೆಳಗ್ಗೆ 9.30 ಕ್ಕೆ ಪಟ್ಟಣ ಎಪಿಎಂಸಿಯಿಂದ ಕುಂಭಮೇಳ,ಹಾಗೂ ಹಲವು ವಾದ್ಯಗಳ ಮೂಲಕ ಮಾಮಾನಿ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ಆರಂಭವಾಗಲಿದೆ.
ಕಾಗವಾಡದ ಯತೀಶ್ವರಾನಂದ ಶ್ರೀಗಳು,ಶ್ರೀ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು,ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್,ಶಾಸಕ ವಿಶ್ವಾಸ್ ವೈದ್ಯ ಸೇರಿದಂತೆ ಜಿಲ್ಲೆಯ ಸಮುದಾಯದ ಗಣ್ಯರು ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ.
0 Comments: