ಹಾಸನದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಘನಘೋರ ದುರಂತ..! Hasana
ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಭೀಕರ ಘಟನೆ ಒಂದು ನಡೆದಿದೆ.ಗಣಪತಿ ಮೆರವಣಿಗೆ ವೇಳೆ ಲಾರಿ ಹರಿದು 8 ಜನರು ಸಾವಪ್ಪಿರುವ ಘಟನೆ ನಡೆದಿದೆ.
ಹಾಸನ ಹಾಗೂ ಹೊಳೆನರಸೀಪುರ ರಾಜ್ಯ ಹೆದ್ದಾರಿಯಲ್ಲಿ ಗಣಪತಿ ವಿಸರ್ಜನೆ ವೇಳೆ ಡಿಜೆ ಹಾಕಿಕೊಂಡು ಭಕ್ತರು ಡ್ಯಾನ್ಸ್ ಮಾಡುತ್ತಿರುವ ವೇಳೆ ಏಕಾಏಕು ಲಾರಿಯೊಂದು ಭಕ್ತರು ಮೇಲೆ ಹರಿದಿದೆ.ಇದರ ಪರಿಣಾಮ ಸ್ಥಳದಲ್ಲೇ 8 ಜನರು ಸಾವನ್ನಪ್ಪಿದ್ದು,15 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಾಳಾಗಿವೆ.
ಹಾಸನ ತಾಲೂಕಿನ ಮೊಸಳಸ ಹೊಸಳ್ಳಿ ಎಂಬಲ್ಲಿ ಈ ಭೀಕರ ದುರಂತ ನಡೆದಿದೆ.ಇಂದು ಸಂಜೆ ಗಣಪತಿ ವಿಸರ್ಜನೆ ಮೆರವಣಿಗೆಯನ್ನ ಅದ್ದೂರಿಯಾಗಿ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಡಿಜೆ ಸದ್ದಿಗೆ ಕುಣಿಯುತ್ತಿದ್ದವರನ್ನ ಯಮಸ್ವರೂಪಿಯಾಗಿ ಬಂದು ಟ್ಯಾಂಕರ್ ಗಾಡಿ ಬಲಿ ಪಡೆದಿದೆ.ವೇಗವಾಗಿ ಬಂದ ಟ್ಯಾಂಕರ್ ಗಾಡಿ ಸಿಕ್ಕ ಸಿಕ್ಕವರ ಮೇಲೆ ಹಾದುಹೋಗಿರುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಘಟನೆ ನಡೆದ ಸ್ಥಳಕ್ಕೆ ಈಗಾಗಲೇ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಲ್ಲದೆ ಡಿಸಿ ಕೂಡ ಸ್ಥಳಕ್ಕೆ ಭೇಟಿ ನೀಡಿ ದುರಂತದ ಬಗ್ಗೆ ಮಾಹಿತಿಯನ್ನ ಪಡೆದಿದ್ದಾರೆ.
0 Comments: