ರಣರಂಗವಾಯ್ತು ಡಿಸಿಸಿ ಬ್ಯಾಂಕ್ ಚುನಾವಣೆ: ಕಾಂಗ್ರೆಸ್-ಬಿಜೆಪಿ ಬೆಂಬಲಿಗರ ಮಾರಾಮಾರಿ..!Belagavi
ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಅತಿರೇಕಕ್ಕೆ ಹೋಗುತ್ತಿದ್ದು ಕಿತ್ತೂರು ಪಿಕೆಪಿಎಸ್ ನಲ್ಲಿ ಮಾರಾಮಾರಿ ಆಗಿರುವ ಘಟನೆ ನಡೆದಿದೆ
ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಚುನಾವಣೆ ಇಂದು ಇತ್ತು ಈ ವೇಳೆ ಕಿತ್ತೂರ ಕಚೇರಿ ಸೆಕ್ರೆಟರಿ ಮೇಲೆ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ
ಪೊಲೀಸ್ ಮುಂಭಾಗದಲ್ಲೇ ಸಾರ್ವಜನಿಕವಾಗಿ ಸೆಕ್ರೆಟರಿ ಭೀಮಪ್ಪನ ಮೇಲೆ ಹಲ್ಲೆ ಮಾಡಲಾಗಿದೆ. ಅದಲ್ಲದೆ ಸೆಕ್ರೆಟರಿಯನ್ನು ಕಿಡ್ಯಾಪ್ ಮಾಡಲು ಯತ್ನಿಸಲಾಗಿದೆ. ಇದೇ ವಿಚಾರಕ್ಕೆ ಕಾಂಗ್ರೆಸ್ ಬಿಜೆಪಿ ಬೆಂಬಲಿಗರ ನಡುವೆ ಪೊಲೀಸ್ ಠಾಣೆ ಮುಂಭಾಗದಲ್ಲೇ ಮಾರಾಮಾರಿಯಾಗಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಗೆ ಪಿಕೆಪಿಎಸ್ ಓರ್ವ ಸದಸ್ಯನಿಗೆ ಮತದಾನದ ಹಕ್ಕು ಇದೆ. ಇಂದು ಮತದಾನದ ಹಕ್ಕು ನೀಡಿ ಠರಾವು ಪಾಸ್ ಮಾಡಲು ಚುನಾವಣೆ ನಡೆದಿತ್ತು.ಈ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ ಕಮ್ಮಿ ಇರುವ ಕಾರಣ ಸೆಕ್ರೆಟರಿ ಕಿಡ್ನಾಪ್ ಮಾಡಿಕೊಂಡು ಹೋಗಿ ಚುನಾವಣೆ ಮುಂದೂಡುವ ಪ್ರಯತ್ನಕ್ಕೆ ಕಾಂಗ್ರೆಸ್ ಬೆಂಬಲಿಗರು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಇದಕ್ಕೆ ಬಿಜೆಪಿ ಬೆಂಬಲಿತ ಸದಸ್ಯರು ವಿರೋಧ ಮಾಡ್ತಿದ್ದಂತೆ ಗಲಾಟೆ ಆರಂಭವಾಗಿದೆ ಎನ್ನಲಾಗಿದೆ.
0 Comments: