ಪತ್ನಿ ಕೊಂದು ಆಕ್ಸಿಡೆಂಟ್ ಕಥೆ ಕಟ್ಟಿದ ಐನಾತಿ ಗಂಡ : ಪೋಲಿಸ್ ತನಿಖೆಯಲ್ಲಿ ಬಯಲಾಯ್ತು ನೀಚ ಕೃತ್ಯ..!Belagavi
ಅವಳನ್ನ ಪ್ರೀತಿಸಿ ಮದುವೆಯಾಗಿದ್ದ ಗಂಡನೊಬ್ಬ ರಸ್ತೆ ಮಧ್ಯದಲ್ಲಿ ಕೊಲೆ ಮಾಡಿ ಇದು ಕೊಲೆಯಲ್ಲ ಅಪಘಾತವೆಂದು ಬಿಂಬಿಸಿ ಮೊಸಳೆ ಕಣ್ಣೀರು ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಗವಾಡ ತಾಲೂಕಿನ ಉಗಾರ್ ಬುದ್ರುಕ್ ಗ್ರಾಮದ ವಕೀಲ ಪ್ರದೀಪ ಕಿರಣಗಿ ಪ್ರೀತಿಸಿ ಮಾದುವೆಯಾಗಿ ಮಡದಿಯನ್ನ ನಡು ರಸ್ತೆಯಲ್ಲಿ ಕೊಂದು ಅಕ್ಷಿಡೆಂಟ್ ಡ್ರಾಮಾ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಚೈತಾಲಿ ಕಿರಣಗಿ ಮೃತ ದುರದೈವಿಯಾಗಿದ್ದು. ತುಂಬು ಗರ್ಭಿಣಿ ಮಡದಿಯನ್ನ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ರವಿವಾರ ಸೆ.07 ರಂದು ನೆರೆಯ ಶಿರಗುಪ್ಪಿ ಗ್ರಾಮಕ್ಕೆ ಆಸ್ಪತ್ರೆಗೆ ಚಿಕಿಸ್ತೆ ಪಡೆದುಕೊಂಡು ಬರುವುದಾಗಿ ಹೇಳಿ ಮಡದಿಯನ್ನ ಉಗಾರ್-ಶಿರಗುಪ್ಪಿ ರಸ್ತೆ ಮದ್ಯದಲ್ಲಿ ಬೈಕ್ ನಿಲ್ಲಿಸಿ ಗಂಡ ಪ್ರದೀಪ ಕಿರಣಗಿ ಮೂತ್ರ ವಿಸರ್ಜನೆಗೆ ಹೋಗಿದ್ದ ಆಗ ಕಾರ್ (KA-22-MM-4238) ವೇಗವಾಗಿ ಬಂದು ಅವಳಿಗೆ ಡಿಕ್ಕಿ ಹೊಡೆದಿದೆ. ತಲೆ ಗಂಭೀರವಾಗಿ ಗಾಯಗೊಂಡ ಚೈತಾಲಿಯನ್ನು ತಕ್ಷಣ ಮಿರಜ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ರಾತ್ರಿ 11:20ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಳೆ ಎಂದು ಕಥೆ ಕಟ್ಟಿದ್ದ ಕಿರಾತಕ ಗಂಡ.
ಆದ್ರೆ ಐನಾತಿ ಗಂಡ ಪ್ರದೀಪ ಮೊಸಳೆ ಕಣ್ಣೀರಿನ್ನ ನೋಡಿದ ಆತನ ಮಾವ ಇದು ಪೂರ್ವ ನಿಯೋಜಿತ ಕೊಲೆ ಎಂದು ಕಾಗವಾಡ ಠಾಣೆಯಲ್ಲಿ ದೂರು ದಾಖಲಿಸಿದ್ದ ಈ ಹಿನ್ನೆಲೆ ತನಿಖೆ ಪ್ರಾರಂಭಿಸಿದ ಪೊಲೀಸರು ಕಾರ್ ಚಾಲಕ ಹಾಗೂ ಮೃತಳ ಗಂಡ ಪ್ರದೀಪ ಕಿರಣಗಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ತನಿಖೆ ವೇಳೆ ಇದು ಅಪಘಾತವಲ್ಲ ಕೊಲೆ ಎಂದು ತಿಳಿದುಬಂದಿದೆ. ಗಂಡ ಕಾರ್ ನಲ್ಲಿ ಮಡದಿಯನ್ನ ಕರೆದುಕೊಂಡು ಬಂದು ರಾಡ್ ನಿಂದ ಹೊಡೆದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಬಹಿರಂಗವಾಗಿದೆ.
ಈಗ ಪ್ರದೀಪ ಹಾಗೂ ರಾಜನ್ ಮತ್ತು ಮಹಾರಾಷ್ಟ್ರ ಮೂಲದ ಕಾರ್ ಚಾಲಕ ಸದ್ದಾಮ ಎಂಬ ಮುವರು ಪೊಲೀಸ್ ರ ಅತಿಥಿಯಾಗಿದ್ದು ಮತ್ತಿಬ್ಬರ ಮೇಲೆ ಮತ್ತೆ ಇಬ್ಬರ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ. ಏನು ಅರಿಯದ ಹೊಟ್ಟೆಯಲ್ಲಿದ್ದ ಮಗು ಹಾಗೂ ಬದುಕಿ ಬಾಳಬೇಕಿದ್ದ ಚೈತಾಲಿ ಘೋರ ಅಂತ್ಯ ಕಂಡಿದ್ದು ದುರಂತ.
0 Comments: