Belagavi: ಡಿಸಿಸಿ ಬ್ಯಾಂಕ್ ಚುನಾವಣೆಯಿಂದ ಹಿಂದಕ್ಕೆ ಸರಿದ್ರಾ ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೋಳಿ..?
ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣೆ ಇನ್ನೇನು ಹತ್ತಿರಕ್ಕೆ ಬಂದಿದ್ದು ಕೆಲವೇ ದಿನಗಳಲ್ಲಿ ನಡೆಯಲಿದ್ದು,ಅದಕ್ಕಾಗಿ ಈಗಾಗಲೇ ಅಭ್ಯರ್ಥಿಗಳು ಕೂಡ ತಾಲಿಮು ನಡೆಸಿದ್ದಾರೆ.ಪ್ರತಿಷ್ಠಿತ ಚುನಾವಣೆಯಾಗಿರುವದರಿಂದ ಈ ಭಾರಿ ಆಯಾ ತಾಲೂಕಿನಿಂದ ಎಂಎಲ್ಎ ಗಳು ಸ್ಪರ್ಧೆ ಮಾಡುತ್ತಿರುವುದು ಕೂಡ ವಿಶೇಷವಾಗಿ.ಡಿಸಿಸಿ ಬ್ಯಾಂಕ್ ಚುನಾವಣೆ ಮೇಲೆ ಈಗಾಗಲೇ ಎಲ್ಲರ ಕಣ್ಣು ನೆಟ್ಟಿದ್ದು,ಈ ಭಾರಿ ನಮ್ಮ ಪೆನಲ್ ಅಧಿಕಾರಕ್ಕೆ ಬರಬೇಕು ಅಂತ ಬಾಲಚಂದ್ರ ಜಾರಕಿಹೊಳಿ ಸತತ ಪ್ರಯತ್ನ ಪಡುತ್ತಿದ್ದಾರೆ.ಕೆಲವು ಕಡೆ ಒಮ್ಮತದ ಅಭ್ಯರ್ಥಿ ಹಾಕುವ ಮೂಲಕ ಅವಿರೋಧ ಆಯ್ಕೆ ಮಾಡಲು ಹೊರಟಿದ್ದಾರೆ.ಇನ್ನೂ ಕೆಲವು ಕಡೆ ಚುನಾವಣೆ ನಡೆಯುವುದು ಕೂಡ ನಿಶ್ಚಿತದಂತೆ ಕಾಣುತ್ತಿದೆ.
ಹಾಗಾಗಿ ಈ ಬಾರಿ ಶಾಸಕರು ಕೂಡ ಈ ಡಿಸಿಸಿ ಬ್ಯಾಂಕ್ ಚುನಾವಣೆ ನಿಲ್ಲುತ್ತಿದ್ದು,ಅದರಲ್ಲಿ ಪ್ರಮುಖವಾಗಿ ಖಾನಾಪುರ ಕ್ಷೇತ್ರದಿಂದ ಎಂಎಲ್ಸಿ ಚೆನ್ನರಾಜ್ ಹಟ್ಟಿಹೋಳಿ ಹೆಸರು ಪ್ರಭಲವಾಗಿ ಕೇಳಿಬಂದಿತ್ತು.ಅಲ್ಲದೇ ಅವರು ಕೂಡ ಖಾನಾಪುರ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು.ಆದ್ರೆ ಈಗ ಏಕಾಏಕಿ ಅವರು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ..
ಹೌದು ಈ ಮಾತನ್ನ ಹೇಳಿರುವುದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು.ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಚೆನ್ನರಾಜ್ ಹಟ್ಟಿಹೋಳಿ ಅವರು ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಿಲ್ಲುವುದಿಲ್ಲ ಕಾರಣಗಳನ್ನ ಮುಂದೆ ತಿಳಿಸಲಾಗುವುದು ಅವರ ಜೊತೆ ನಾನು ಈಗಾಗಲೇ ಚರ್ಚೆ ಕೂಡ ಮಾಡಿದ್ದೇನೆ ಅಂತ ತಿಳಿಸಿದ್ದಾರೆ.ಆದರೆ ಈ ಬಗ್ಗೆ ಅಧಿಕೃತವಾಗಿ ಚೆನ್ನರಾಜ್ ಹಟ್ಟಿಹೋಳಿ ಅವರಿಂದ ಮಾಹಿತಿ ಹೊರ ಬರಬೇಕಿದೆ...
0 Comments: