Belagavi : ಬೆಳಗಾವಿಯಲ್ಲಿ ಜಿಯೋ ಟೆಲಿಕಾಂ ಸಿಬ್ಬಂದಿಗಳಿಂದ ಪ್ರತಿಭಟನೆ..!
ಬೆಳಗಾವಿ ನಗರದ ಬಾಕ್ಸೈಟ್ ರೋಡ್ ನಲ್ಲಿರುವ ಜಿಯೋ ಕಚೇರಿ ಎದುರು ಜಿಯೋ ಟೆಲಿಕಾಂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ರು.ಜಿಯೋ ಟೆಲಿಕಾಂ ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನ ಕಾರಣವಿಲ್ಲದೇ ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಪ್ರತಿಭಟನೆ ನಡೆಸಲಾಯಿತು.
ಜಿಯೋ ಟೆಲಿಕಾಂ ಸಂಸ್ಥೆ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಕಾರಣ ಹೇಳದೆ ಟರ್ಮಿನೇಟ್ ಮಾಡಲಾಗುತ್ತಿದೆ.ಹಗಲು- ರಾತ್ರಿ,ಮಳೆ-ಚಳಿ ಎನ್ನದೇ ಕೆಲಸ ಮಾಡುತ್ತಿದ್ದೇವೆ ಆದ್ರೆ ಜಿಯೋ ಟೆಲಿಕಾಂ ಸಂಸ್ಥೆಯವರು ಏಕಾಏಕಿ ಸಣ್ಣ ಕಾರಣ ಹಿಡಿದು ನಮ್ಮನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ನಮಗೆ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ.
ವಿವಿಧ ಟೆಲಿಕಾಂ ನಲ್ಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳೆಲ್ಲಾ ಸೇರಿಕೊಂಡು ಒಕ್ಕೂಟ ರಚನೆ ಮಾಡಿಕೊಂಡಿದ್ದೇವೆ ಈ ಒಕ್ಕೂಟಕ್ಕೆ ಸೇರ್ಪಡೆಯಾದವರಿಗೆ ಈ ರೀತಿ ಕೆಲಸದಿಂದ ತೆಗೆದುಹಾಕುವ ಕೆಲಸ ಮಾಡುತ್ತಿದ್ದಾರೆ.ನಮ್ಮ ಕಷ್ಟಗಳಿಗೆ ಸ್ಪಂದನೆಯಾಗುವ ನಿಟ್ಟಿನಲ್ಲಿ ನಾವು ಒಕ್ಕೂಟವನ್ನ ರಚನೆ ಮಾಡಿಕೊಳ್ಳಲಾಗಿದೆ.ಆದ್ರೆ ಇದನ್ನೇ ಕಾರಣ ಹಿಡಿದು ಕೆಲಸದಿಂದ ವಜಾ ಮಾಡುತ್ತಿದ್ದು,ಇದ್ರಿಂದ ನಮ್ಮ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಟೆಲಿಕಾಂ ಸಂಸ್ಥೆಯಲ್ಲಿ ನಾವು ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದು,ಟವರ್ ಮೆಂಟೆನೆನ್ಸ್ ಹಿಡಿದು ನೆಟ್ವರ್ಕ್ ಸಮಸ್ಯೆ ಬಂದಲ್ಲಿ ಅದನ್ನ ಸರಿಪಡಿಸಿ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದು ಈಗ ಜಿಯೋ ಸಂಸ್ಥೆಯಿಂದ ಈ ರೀತಿಯ ವರ್ತನೆ ಖಂಡಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ.ಹಾಗಾಗಿ ನಮ್ಮ ಮನವಿಯನ್ನ ಸ್ವೀಕಾರ ಮಾಡಿ ನಮ್ಮನ್ನು ಯಾವುದೇ ರೀತಿ ಕೆಲಸದಿಂದ ತೆಗೆಯದಂತೆ ಒತ್ತಾಯ ಮಾಡುತ್ತಿದ್ದೇವೆ ಎಂದು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ...
0 Comments: