ಬೆಳಗಾವಿ: ಬೆಳಗಾವಿಯಲ್ಲಿ ಗೋವಿನ ಜೋಳದಲ್ಲಿ ಗಣಪತಿ ಮೂರ್ತಿ ಕಲಾಕೃತಿ ನಿರ್ಮಾಣ..!
ಬೆಳಗಾವಿ: ಪಿಒಪಿ ಗಣೇಶ ಮೂರ್ತಿಗಳ ನಿಷೇಧ ಇದ್ದರೂ ಬಹುತೇಕರು ಪಿಒಪಿ ಮೂರ್ತಿಗಳನ್ನೆ ತಯಾರಿಸುತ್ತಾರೆ. ಆದರೆ, ಬೆಳಗಾವಿಯ ಓರ್ವ ಕಲಾವಿದ ಕಳೆದ 25 ವರ್ಷಗಳಿಂದ ಪರಿಸರ ಸ್ನೇಹಿ ಗಣಪನನ್ನೆ ತಯಾರಿಸುತ್ತಿದ್ದಾರೆ. ಈ ಬಾರಿ ಗೋವಿನಜೋಳದ ನುಚ್ಚಿನಲ್ಲಿ ವಿಭಿನ್ನವಾಗಿ ಗಣಪತಿ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಈಗ ಎಲ್ಲೆಡೆ ಪಿಒಪಿ ಗಣೇಶ ಮೂರ್ತಿಗಳ ಅಬ್ಬರ ಜೋರಾಗಿದೆ. ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸುವವರು ಅಪರೂಪ. ಅಂತವರಲ್ಲಿ ಬೆಳಗಾವಿಯ ನ್ಯೂ ಗಾಂಧಿ ನಗರದ ಕಲಾವಿದ ಸುನೀಲ ಮಲ್ಲಪ್ಪ ಆನಂದಾಚೆ ಕೈಯಲ್ಲಿ ಗೋವಿನಜೋಳದ ನುಚ್ಚಿನಲ್ಲಿ ಅದ್ಭುತವಾಗಿ ಗಣೇಶ ಮೂರ್ತಿ ಅರಳಿ ನಿಂತಿದೆ.
11.5 ಅಡಿ ಎತ್ತರ ಮೂರ್ತಿ ಇದಾಗಿದ್ದು, 31 ಕೆಜಿ ಗೋವಿನಜೋಳದ ನುಚ್ಚು, 12 ಕೆಜಿ ರದ್ದಿ ಪೇಪರ್, ಭತ್ತದ ಹುಲ್ಲು ಬಳಸಲಾಗಿದೆ. ಪುಡಿ ಮಾಡಿದ್ದ ಗೋವಿನಜೋಳವನ್ನು ಗೋಧಿ ಮತ್ತು ಮೈದಾ ಹಿಟ್ಟಿನಿಂದ ತಯಾರಿಸಿದ ಅಂಟಿನೊಂದಿಗೆ ಬೆರೆಸಿ, ಪೇಪರ್ ನಲ್ಲಿ ವಿನ್ಯಾಸ ಮಾಡಿದ್ದ ಮೂರ್ತಿಗೆ ಅಂಟಿಸಿದ್ದಾರೆ. ಮೂರ್ತಿ ಒಳಗೆ ಹುಲ್ಲನ್ನು ತುಂಬಿದ್ದಾರೆ. ಮಹಾರಾಷ್ಟ್ರದ ಟಿಟವಾಳ ಮಾದರಿ ಗಣಪತಿ ಇದಾಗಿದ್ದು, ಸುಮಾರು 45 ಸಾವಿರ ರೂ. ಖರ್ಚು ಮಾಡಿದ್ದಾರೆ.
0 Comments: