Dharmastala: ಸೆ.1ಕ್ಕೆ ಧರ್ಮಸ್ಥಳದಲ್ಲಿ ಬಿಜೆಪಿ ರಾಜ್ಯ ಮಟ್ಟದ ಸಮಾವೇಶ ಆಯೋಜನೆ..!
ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 1 ರಂದು ಬಿಜೆಪಿ ರಾಜ್ಯ ಮಟ್ಟದ ಸಮಾವೇಶ ಆಯೋಜನೆ ಮಾಡಲಾಗುವುದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೆ.1ಕ್ಕೆ ಧರ್ಮಸ್ಥಳದಲ್ಲಿ ರಾಜ್ಯ ಮಟ್ಟದ ಸಮಾವೇಶ ಆಯೋಜನೆ ಮಾಡಲಾಗಿದೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರಯ ಆಗಮಿಸಲಿದ್ದಾರೆ.ಧರ್ಮಸ್ಥಳ ಚಲೋ ಎಂದು ಈಗಾಗಲೇ ಬಿಜೆಪಿ ವತಿಯಿಂದ ಕರೆ ಕೊಡಲಾಗಿದೆ..
ಧರ್ಮಸ್ಥಳದ ವಿಚಾರ ವಿದೇಶ ಮಾಧ್ಯಮಗಳಲ್ಲಿ ಅಪಚಾರದ ವರದಿಯಾಗಿದ್ದು,ಇದರಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ.ಕಾಂಗ್ರೆಸ್ ವಿದೇಶಿ ಪರಂಪರೆ ಹೊಂದಿದೆ.ಯಾರೋ ತಿಮರೋಡಿ, ಜಯಂತ್, ಸಮೀರ್, ಕೇವಲ ನೆಪ ಮಾತ್ರ
ತಮಿಳುನಾಡಿನ ಎಂ ಪಿ ಸಸಿಕಾಂತ್ ಸೆಂಥಿಲ್ ಅವರ ಷಡ್ಯಂತ್ರ ಇದೆ.ಇದನ್ನ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲು ಮನವಿ ಮಾಡುತ್ತೇವೆ. ಇದರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಕೈವಾಡವಿದೆ.ಇದಕ್ಕೆ ವಿದೇಶದ ಹಣ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ವಿರೇಂದ್ರ ಹೆಗ್ಡೆ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ.ಕಾನೂನಿನಲ್ಲಿ ಶವ ಹೊರ ತಗೆಯಲು ಅವಕಾಶವಿಲ್ಲ,ಇದಕ್ಕೆ ಕೋರ್ಟ್ ಅನುಮತಿ ಬೇಕು ಆದ್ರೆ ಈ ಬಗ್ಗೆ ತನಿಖೆ ನಡೆಸಿಲ್ಲ ಕಾಂಗ್ರೆಸ್ ಹಿಂದು ವಿರೋಧಿಗಳು,
ತಮಿಳುನಾಡಿನ ಎಂ ಪಿ ಸೆಂಥಿಲ್ ಬಂಧಿಸಲಿ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ....
0 Comments: