ಧರ್ಮಸ್ಥಳ ಪ್ರಕರಣವನ್ನ NIA ಗೆ ವಹಿಸಲು ಅಮಿತ್ ಶಾ ಭೇಟಿಯಾದ ಸ್ವಾಮೀಜಿಗಳ ನಿಯೋಗ..! Mangalore
ಧರ್ಮಸ್ಥಳದಲ್ಲಿನ ನೂರಾರು ಶವಗಳನ್ನ ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಗೆ ಈ ಕೇಸ್ ನ್ನ ವಹಿಸಲು ತೀವ್ರವಾಗಿ ಆಗ್ರಹ ವ್ಯಕ್ತವಾಗುತ್ತಿದೆ..
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಖುದ್ದು ಭೇಟಿಯಾಗಿ ಸ್ವಾಮೀಜಿಗಳ ನಿಯೋಗ ಒಂದು ಮನವಿ ಸಲ್ಲಿಸಿದೆ.ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರ ಸ್ವಾಮೀಜಿಯ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿದೆ.
ದೆಹಲಿಯ ಅಮಿತ್ ಶಾ ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಧರ್ಮಸ್ಥಳ ಪ್ರಕರಣ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.ಕ್ಷೇತ್ರದ ವಿರುದ್ದ ನಡೆಯುತ್ತಿರುವ ಅಪಪ್ರಚಾರದ ಕುರಿತು ಮಾಹಿತಿಯನ್ನ ನೀಡಿದ್ದಾರೆ.ಅಲ್ಲದೇ ಈ ಪ್ರಕರಣವನ್ನ ಆದಷ್ಟು ಬೇಗನೆ NIA ವಹಿಸಬೇಕೆಂದು ಮನವಿ ಸಲ್ಲಿಸಿದ್ದಾರೆ..
0 Comments: