INFO Breaking
Live
wb_sunny

Breaking News

15 ವರ್ಷದ ಬಾಲಕಿಯನ್ನ ಮದುವೆಯಾಗಿರುವ ಗ್ರಾಮಪಂಚಾಯಿತಿ ಅಧ್ಯಕ್ಷ..! Belagavi

15 ವರ್ಷದ ಬಾಲಕಿಯನ್ನ ಮದುವೆಯಾಗಿರುವ ಗ್ರಾಮಪಂಚಾಯಿತಿ ಅಧ್ಯಕ್ಷ..! Belagavi

ಗ್ರಾಮ ಪಂಚಾಯತಿ ಅಧ್ಯಕ್ಷ 15 ವರ್ಷದ ಬಾಲಕಿಯನ್ನ ಮದುವೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪೂರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ..

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಗೆ ಬರುವ ಬಸ್ಸಾಪೂರ ಗ್ರಾಮದಲ್ಲಿ ಇಂತದೊಂದು ಘಟನೆ ನಡೆದಿದೆ.ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮಶಿ ಕಾಲಿಮಣಿ ಎಂಬಾತನಿಂದ ಈ ಕೃತ್ಯ ನಡೆದಿದೆ.

ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.2023 ನವೆಂಬರ್ 5 ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ಕಾಲಿಮಣಿ ವಿವಾಹವಾಗಿದ್ದ.ಇನ್ನೂ ಬಂಧನದಿಂದ ತಪ್ಪಿಸಿಕೊಳ್ಳಲು ಈ ಅಧ್ಯಕ್ಷ ಕಳ್ಳಾಟ ನಡೆಸುತ್ತಿದ್ದ.ದೂರು ದಾಖಲಾದ ತಕ್ಷಣವೇ ಬಸ್ಸಾಪೂರ ಗ್ರಾಮಕ್ಕೆ ನಾಲ್ಕು ಸಲ ಮಕ್ಕಳ ರಕ್ಷಣಾ ತಂಡದ ಮಕ್ಕಳ ರಕ್ಷಣಾಧಿಕಾರಿ ಡಾ.ಪರ್ವಿನ್ ಅವರು ಭೇಟಿ ನೀಡಿದ್ದಾರೆ.ಆದ್ರೂ ಕೂಡ ಬಾಲಕಿಯನ್ನ ಪತ್ತೆ ಹಚ್ಚಲು ವಿಫಲರಾಗಿದ್ದರೂ.ಇದು ಅಲ್ಲದೇ ಈ ಮಧ್ಯೆ ಅಧ್ಯಕ್ಷ ಭೀಮಶಿ ಆಕೆ ಪ್ರಾಪ್ತ ವಯಸ್ಸಿನವಳು ಎಂದು ದಾಖಲೆ ಕೂಡ ಬಿಡುಗಡೆ ಮಾಡಿದ್ದ..

ಯಾವಾಗ ಅಧ್ಯಕ್ಷ ಬಂಧನ ಭೀತಿಯಿಂದ ಅಪ್ರಾಪ್ತೆಯ ನಕಲಿ ಜನನ ಪ್ರಮಾಣ ಪತ್ರ ವೈರಲ್  ಮಾಡಿದ್ದ .ಇದನ್ನ ಮಕ್ಕಳ ರಕ್ಷಣಾ ತಂಡ ಶಾಲಾ ಟ್ರಾನ್ಸಫರ್ ಸರ್ಟಿಫಿಕೇಟ್ ಜೊತೆಗೆ ಹೋಲಿಕೆ ಮಾಡಿ ಇದು ಬಾಲ್ಯ ವಿವಾಹ ಎಂದು ಧೃಡ ಮಾಡಿಕೊಂಡಿದ್ದರು.ಕೃತ್ಯ ಎಸಗಿರುವುದು ಧೃಡವಾದ ಹಿನ್ನೆಲೆ ಸದ್ಯ ಅಧ್ಯಕ್ಷನ ವಿರುದ್ದ ಪೋಕ್ಸೋ ಕೇಸ್ ದಾಖಲಾಗಿದೆ...

0 Comments:

Responsive

Ads

Here