Haveri: ಕರ್ತವ್ಯ ನಿರ್ವಹಣೆ ನೆಪದಲ್ಲಿ ಸರ್ಕಾರಿ ಅಧಿಕಾರಿಗೆ ಅವಮಾನ ಮಾಡಿದ್ರಾ ಮಹಿಳಾ ಆಯೋಗದ ಅಧ್ಯಕ್ಷರು.?
ಹಾವೇರಿ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಇನ್ಸ್ಪೆಕ್ಟರ್ ಚೇರ್ ಮೇಲೆ ಕುಳಿತು ರಿಜಿಸ್ಟರ್ ಪರಿಶೀಲನೆ ಮಾಡಿದ್ದಾರೆ.ಸದ್ಯ ಮಹಿಳಾ ಅಧ್ಯಕ್ಷರ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.ಮಾಜಿ IPS ಅಧಿಕಾರಿ ಭಾಸ್ಕರ ರಾವ್ ಅವರು ಮಹಿಳಾ ಆಯೋಗದ ಅಧ್ಯಕ್ಷರು ಸಿಪಿಐ ಅವರ ಚೇರ್ ಮೇಲೆ ಕುಳಿತು ರಿಜಿಸ್ಟರ್ ಬುಕ್ ಚೆಕ್ ಮಾಡುವ ಪೋಟೊ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ..
ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿ ರಚಿಸಿರುವ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಪೋಟೊ ಹಂಚಿಕೊಂಡು ಅಸಮಾಧಾನವನ್ನ ಭಾಸ್ಕರ್ ರಾವ್ ಅವರು ಹೊರಹಾಕಿದ್ದಾರೆ.ಅಧಿಕಾರಿಯ ಕುರ್ಚಿ ಮೇಲೆ ಕುಳಿತುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.ಇದೇ ವೇಳೆ ತಮ್ಮತಮ್ಮ ಅಭಿಪ್ರಾಯವನ್ನ ಅದೇ ಗ್ರುಪ್ ನಲ್ಲಿ ಇತರೆ ಪೊಲೀಸ್ ಸಿಬ್ಬಂದಿ ಹಂಚಿಕೊಂಡಿದ್ದಾರೆ.
ಚಾಟ್ ಜಿಪಿಟಿಯಲ್ಲಿ ಪ್ರಶ್ನೆ ಹಾಕಿ ಉತ್ತರವನ್ನ ಪಡೆದ ಪೊಲೀಸ್ ಸಿಬ್ಬಂದಿ,ಚಾಟ್ ಜಿಪಿಟಿಯಲ್ಲಿ ಇದು ಶಿಸ್ತು ಹಾಗೂ ಪ್ರೋಟೊಕಾಲ್ ವಿರುದ್ದವಾಗಿದೆ ಎಂದು ಉತ್ತರ ಬಂದಿದೆ ಎಂದು ಗ್ರುಪ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
0 Comments: