ಬೆಳಗಾವಿ ಬಿಮ್ಸ್ ನಲ್ಲಿದ್ದಾಳೆ ನಕಲಿ ನರ್ಸ್: ಆಡಳಿತ ಮಂಡಳಿ ಡೋಂಟ್ ಕೇರ್..! Belagavi
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸಿಕ್ಕ ಸಿಕ್ಕ ವಾರ್ಡ್ ಗಳಿಗೆ ಓಡಾಟ ನಡೆಸಿದ ನಕಲಿ ನರ್ಸ್ ವಿದ್ಯಾರ್ಥಿನಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ.
ನಾನು ಪಿಜಿ ವಿದ್ಯಾರ್ಥಿನಿ ಎಂದು ಹೇಳಿಕೊಂಡು ಸಿಕ್ಕಸಿಕ್ಕವರಿಗೆ ಬೀಮ್ಸ್ ಆಸ್ಪತ್ರೆಯಲ್ಲಿ ಕಳೆದ ಎರಡ್ಮೂರು ತಿಂಗಳುಗಳ ಕಾಲ ಈ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾಳೆ.
ಇವಳನ್ನು ಕಾರವಾರ ಮೂಲದ ಸನಾ ಶೇಖ್ ನಕಲಿ ನರ್ಸ್ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಸದ್ಯ ಬೆಳಗಾವಿ ಕುಮಾರಸ್ವಾಮಿ ಲೇಔಟ್ ನಲ್ಲಿ ವಾಸ ಇರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ವೈದ್ಯಕೀಯ ವಿದ್ಯಾರ್ಥಿನಿ ವೇಷ ಧರಿಸಿ ಓಡಾಟ ನಡೆಸುವ ವೇಳೆ ವಿದ್ಯಾರ್ಥಿನಿ ಸಿಕ್ಕಿಬಿದಿದ್ದಾಳೆ.
ಸರ್ಜಿಕಲ್ ವಾರ್ಡ್, ಓಪಿಡಿ ಹೀಗೆ ಆಸ್ಪತ್ರೆ ಎಲ್ಲ ವಿಭಾಗದಲ್ಲೂ ಓಡಾಡಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾಳೆ ಎನ್ನಲಾಗಿದೆ. ಬೀಮ್ಸ್ ನಲ್ಲಿ ಕಳೆದ ಮೂರು ತಿಂಗಳಿನಿಂದ ಅನಧಿಕೃತವಾಗಿ ಪ್ರ್ಯಾಕ್ಟೀಸ್ ಮಾಡ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೆಲವೊಂದು ಬಾರಿ ಅನುಮಾನಗೊಂಡ ಸಿಬ್ಬಂದಿಗಳು ಪ್ರಶ್ನಿಸಿದರೆ ಬಿಮ್ಸ್ ನಿರ್ದೇಶಕರ ಹೆಸರೇಳಿ ನಕಲಿ ವೈದ್ಯ ವಿದ್ಯಾರ್ಥಿನಿ ಧಮ್ಕಿ ಹಾಕಿದ್ದಾಳೆ. ಇದೀಗ ಬೀಮ್ಸ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೆಕ್ಯುರಿಟಿ ಗಾರ್ಡ್ ಕೈಗೆ ರೆಡಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾಳೆ.
ಈ ವೇಳೆ ತಕ್ಷಣವೇ ಬೆಳಗಾವಿ ಬೀಮ್ಸ್ ಸರ್ಜನ್, ಆರ್ ಎಂಓ ಗಮನಕ್ಕೆ ಬೀಮ್ಸ್ ಸೆಕ್ಯುರಿಟಿ ಗಾರ್ಡ್ ತಂದಿದ್ದಾರೆ. ಕರೆದು ವಿಚಾರಣೆ ವೇಳೆ ಬೇರೊಂದು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಮಾಡ್ತಿರೋದು ದೃಢವಾಗಿದೆ. ಆಸ್ಪತ್ರೆಯಲ್ಲಿರೋ ವಿಭಾಗವೊಂದರ ಹೆಡ್ ಕುಮ್ಮಕ್ಕಿಂದ ಬಿಮ್ಸ್ ನಲ್ಲಿ ಪ್ರ್ಯಾಕ್ಟೀಸ್ ಮಾಡ್ತಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೀಮ್ಸ್ ಆಡಳಿತ ಮಂಡಳಿ ಯಡವಟ್ಟಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ನಿರಾಕರಿಸಿದ್ದಾರೆ.
0 Comments: